Sunday, March 22, 2015

ನಾವು ಇಷ್ಟು ಅಪ್ರಬುದ್ಧರೆ?

ಸಾಮಾನ್ಯ ಜನರು ಎಷ್ಟು ಬೇಗ ಮೋಸ ಹೋಗುತ್ತಾರೆ ಎಂಬುದನ್ನು ನಾವು ಸಧ್ಯ ಕರ್ನಾಟಕದಲ್ಲಿ ಆಗುತ್ತಿರುವ ಘಟನೆ ನೋಡಿದರೆ ತಿಳಿಯುತ್ತಾರೆ ಇದೆ. ಭಾರತದ ಜನರು ರಾಜಕೀಯವಾಗಿ  ಇನ್ನು ಅಪ್ರಬುದ್ಧರು. ಇದು ಸಧ್ಯದಲ್ಲಿ ಆಗುತ್ತಿರುವ ಎಲ್ಲ ಘಟನೆಗಳು ಅದನ್ನೆ ತೋರುತ್ತಿದೆ. ಮರಣ ಹೊಂದಿದ ಅಧಿಕಾರಿಯ ಬಗ್ಗೆ ರಾಜಕಾರಣಿಗಳು ಮಾಡುತ್ತಿರುವ ನಾಟಕ ಜನರಿಗೆ ಇನ್ನೂ ಅರ್ಥವಾಗದಿರುವದೆ ಜನರ ಮುಗ್ಧತೆಯನ್ನು ಎತ್ತಿ ತೋರುತ್ತಿದೆ. ನಾವಿನ್ನೂ ಪ್ರಬುದ್ಧರಾಗಿಲ್ಲ ಎಂಬುದಕ್ಕೆ ಇದು ಬಲವಾದ ಸಾಕ್ಷಿಯಾಗಿದೆ. ಕುಮಾರಣ್ಣನ ಈ ಮಟ್ಟದ ರಾಜಕೀಯ ಅವರ ಜಾತಿ ರಾಜಕಾರಣಕ್ಕೆ ಸರಿಯಾಗಿದೆ. ಒಂದು ವೇಳೆ ಅವರು ಜನತೆಯ ಬಗ್ಗೆ ಕಾಳಜಿ ಹೊಂದಿದ್ದರೆ ತೊಂದರೆಗೊಳಗಾದ ರೈತರ ಬಗ್ಗೆ ಯೋಚಿಸುವದನ್ನು ಬಿಟ್ಟು ಸಾಮಾನ್ಯ ಜನತೆಯ ಗಮನವನ್ನು ಬೇರೇಕಡೆ ತಿರುಸುತ್ತಿರುವುದು ಯಾವ ಮಟ್ಟಿಗೆ ಸರಿ? ರೈತರ ಆತ್ಮಹತ್ಯೆಯ ಬಗ್ಗೆ ಗಮನಿಸದೇ ಒಬ್ಬ ಅಧಿಕಾರಿಯ ಆತ್ಮಹತ್ಯೆಯನ್ನು ಇಷ್ಟು ಒತ್ತು ಕೊಡುವುದು ಯಾವ ನ್ಯಾಯ? ಹಾಗಾದರೆ ಜನ ಸಾಮಾನ್ಯರ ಮರಣಕ್ಕೆ ನಮ್ಮ ವ್ಯವಸ್ಥೆಯಲ್ಲಿ ಕಿಂಚಿತ್ತೂ ಬೆಲೆ ಇಲ್ಲವೆ?